Chief Editor
Manohar. R (Manu)
Photo Journalist
chitrataramanu@gmail.com
+91 9845549026
ಲೈಟ್ ಬಾಯ್ ನಿಂದ``ಕಮರೊಟ್ಟು ಚೆಕ್ ಪೋಸ್ಟ್``ಇಗ ``ಧೈರ್ಯಂ ಸರ್ವತ್ರ ಸಾಧನಂ``ಎಂಬ ದೊಡ್ಡ ಮಟ್ಟದ ಚಿತ್ರ ನಿರ್ಮಾಪಕ ಆನಂದ್
Posted date: 03 Sat, Feb 2024 08:16:25 AM
ಒಂದು ಕಾಲದಲ್ಲಿ ಆಫೀಸ್ ಬಾಯ್  ಆಗಿ ದುಡಿಯುತ್ತಿದ್ದ ಒಬ್ಬ ಸಾಮಾನ್ಯ ಹುಡುಗ  ಈಗ ಒಂದು ದೊಡ್ಡ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಸ್ಥಾಪಿಸಿ ಮಾಲಿಕನಾಗಿ  ಚಿತ್ರದ ನಿರ್ಮಾಪಕನಾಗುವುದು ಸಾಧ್ಯವೇ? ಸಾಧ್ಯ ಅಂತಾ ಸಾಧಿಸಿಯೇ ಬಿಟ್ಟಿದ್ದಾರೆ..ಇವರು ಹಾಸನ ಜಿಲ್ಲೆಯ ಅರಸೀಕೆರೆಯ ಮೂಲದ ಆನಂದ್ ಯಾವಾಗಲೂ ಮಾತು ಕಡಿಮೆ, ಕೆಲಸ ಜಾಸ್ತಿ..ಯಾವುದರ ಉಸಾಬರಿಗೂ ಹೋಗದ ಆನಂದ್ ಸಿನಿಮಾ ಪ್ರೇಮಿ.

ಸಿನಿಮಾ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಉದ್ದೇಶದಿಂದ ಡಿಗ್ರಿ ಮುಗಿಸಿದ ನಂತರ ಓದಿಗೆ ಗುಡ್ ಬೈ ಹೇಳಿ ಬೆಂಗಳೂರಿಗೆ ಹೊರಟು ಕಷ್ಟಪಟ್ಟು ಒಂದು ಪ್ರೊಡಕ್ಷನ್ ಯೂನಿಟ್ ನಲ್ಲಿ ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ   ನಂತರ ಅಲ್ಲೇ "ಲೈಟ್ ಬಾಯ್" ಆಗಿ ಸೇರುತ್ತಾರೆ.. ಲೈಟ್ ಬಾಯ್ ಕೆಲಸವನ್ನು ಮಾಡಿಕೊಂಡೆ ಶೂಟಿಂಗ್ ವಿಚಾರಗಳನ್ನು ಕೆಲಸಗಳನ್ನು ಕಲಿಯುತ್ತಾ ಹೋಗುತ್ತಾರೆ..
 
ಇವರಿಗೆ ನಿರ್ದೇಶಕನಾಗಿ ಹೆಸರು ಮಾಡಬೇಕು ಎಂಬ ಬಹು ದೊಡ್ಡ ಆಸೆ ಇರುತ್ತದೆ..

ಒಂದು ದಿನ  ಖ್ಯಾತ ನಿರ್ದೇಶಕ ಶಿವಮಣಿಯವರ "ಅಕ್ಕ" ಧಾರಾವಾಹಿಗೆ ಆನಂದ್ ಲೈಟ್ ಹಿಡಿಯುತ್ತಾರೆ..
ಬ್ರೇಕ್ ನಲ್ಲೂ ಸೆಟ್ ನಲ್ಲೇ ಇರುತ್ತಿದ್ದ, ಪ್ರತಿಯೊಂದು ವಿಷಯವನ್ನು ಗಮನಿಸುತ್ತಿದ್ದ ಇವರ ಆಸಕ್ತಿಯನ್ನು ಗಮನಿಸಿದ ಶಿವಮಣಿಯವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿಯಾ ಅಂತ ಕೇಳುತ್ತಾರೆ.
 
ಇಷ್ಟು ದಿನ ಇದೇ ಸಮಯವನ್ನು ಕಾಯುತ್ತಿದ್ದ ಆನಂದ್ ಲೈಟ್ ಬಾಯ್ ನಿಂದ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಾರೆ..

ಈ ಸೀರಿಯಲ್ ನಂತರ ಎಸ್. ನಾರಾಯಣ್‌ ಅವರ ಸೇವಂತಿ ಸೇವಂತಿ ಚೆಲುವಿನ ಚಿತ್ತಾರ, ಚಂಡ, ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಾರೆ, ನಂತರದ ದಿನಗಳಲ್ಲಿ ಝೀ ಕನ್ನಡ ವಾಹಿನಿಯ "ಯಾರಿಗುಂಟು ಯಾರಿಗಿಲ್ಲಾ" ಕುಣಿಯೋಣು ಬಾರ, ಸೈ, ಬಾಳೇ ಬಂಗಾರ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಮಾಡಿ ಅಸೋಸಿಯೇಟ್ ಅನ್ನಿಸಿಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಆನಂದ್ ಕೆಲಸವನ್ನು ಗುರುತಿಸಿದ "ಶ್ರೀ ಶಂಕರ" ಟಿವಿಯ ಮಾಲೀಕರಾದ  "ಜಿ.ಶ್ರೀನಿವಾಸ್ ಹಾಗೂ ಹರಿಕೃಷ್ಣ" ರವರು "ಶ್ರೀ ಶಂಕರ ಟಿವಿ" ಗೆ ಆನಂದ್ ಅವರನ್ನು ಕಾರ್ಯಕ್ರಮ ನಿರ್ಮಾಪಕನಾಗಿ ಬಡ್ತಿ ನೀಡುತ್ತಾರೆ,
 
ಕೆಲಸವನ್ನು ಮಾಡಿಕೊಂಡೆ ಜೊತೆಗೆ ಇನ್ನೂ ಕಲಿಕೆಯ ದೃಷ್ಟಿಯಿಂದ ಸಂಜೆಯ ವೇಳೆಯಲ್ಲಿ ಅಭಿನಯ ತರಂಗ ಎಂಬ ರಂಗಭೂಮಿಗೆ ಸೇರಿ ಒಂದು ವರ್ಷದ ಕೋರ್ಸ್ ಮಾಡುತ್ತಾರೆ, ನೂರಾರು ಬೀದಿ ನಾಟಕ, ನೂರಾರು ಬೇರೆ ಬೇರೆ ನಾಟಕ ಪ್ರದರ್ಶನಗಳಲ್ಲಿ ಭಾಗಿಯಾಗಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಒಂದು ಸಂಧರ್ಭದಲ್ಲಿ ನಿರ್ದೇಶಕನಾಗಬೇಕಿದ್ದ ಆನಂದ್ ಅನಿವಾರ್ಯ ಕಾರಣದಿಂದ ನಿರ್ಮಾಪಕನಾಗಿಬಿಡುತ್ತಾರೆ..

2016 ರಲ್ಲಿ ಒಂದು ಚಿತ್ರ ನಿರ್ಮಾಣ ಮಾಡಲು ಹೋಗಿ ಕೈ ಸುಟ್ಟು ಕೊಳ್ಳುತ್ತಾರೆ.  ಸೋಲನ್ನು ಅನುಭವಿಸುತ್ತಾರೆ,
ಮೈ ತುಂಬ ಸಾಲದ ಹೊರೆ ಬೀಳುತ್ತದೆ.. ಸಾಮಾನ್ಯವಾಗಿ ಸೋಲೋಪ್ಪದ ಆನಂದ ನಂತರ ಛಲ ಬಿಡದೆ
 
2018 ರಲ್ಲಿ "ಕಮರೊಟ್ಟು ಚೆಕ್ ಪೋಸ್ಟ್" ಎಂಬ ಯಶಸ್ವಿ ಚಿತ್ರವನ್ನು ನಿರ್ಮಿಸುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕ ನಾಗುತ್ತಾರೆ.
 
2020 ರಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿಷಯಾಧಾರಿತ "ಗುಬ್ಬಿಮರಿ" ಎಂಬ ಚಿತ್ರವನ್ನು ಮಾಡಿ  ಚಿತ್ರರಂಗದ ಗಣ್ಯರಿಂದ ಮೆಚ್ಚುಗೆ ಪಡೆಯುತ್ತಾನೆ.
 
2022 ರಲ್ಲಿ "ಧೈರ್ಯಂ ಸರ್ವತ್ರ ಸಾಧನಂ" ಎಂಬ ದೊಡ್ಡ ಮಟ್ಟದ ಚಿತ್ರವೊಂದನ್ನು ನಿರ್ಮಿಸಿದ್ದಾರೆ
ಧೈರ್ಯಂ ಸರ್ವತ್ರ ಸಾಧನಂ ಚಿತ್ರವು ಪೆಬ್ರವರಿ 23ಕ್ಕೆ  ಬಿಡುಗಡೆಯಾಗುತ್ತಿದೆ..
 
ಒಬ್ಬ ಆಫೀಸ್ ಬಾಯ್ ಹುಡುಗ, ಒಬ್ಬ ಲೈಟ್ ಬಾಯ್ ಹುಡುಗ, ಈ ಮಟ್ಟಿಗೆ ನಾಲ್ಕು ಚಿತ್ರಗಳ ನಿರ್ಮಾಣ ಮಾಡಿ ನಿರ್ಮಾಪಕನಾಗಿ ಬೆಳೆದು ನಿಂತಿರುವುದು   ಹೆಮ್ಮೆಯ ವಿಷಯವಾಗಿದೆ
ಅದರೆ ಇಷ್ಟು ವರ್ಷಗಳ ಇವನ ಪಯಣದಲ್ಲಿ ಪಟ್ಟಿರುವ ಕಷ್ಟ ಅವರಿಗೆ  ಮಾತ್ರ ಗೊತ್ತು....
 
ಆನಂದ್ ಗೆ ಶ್ರದ್ಧೆ ಇದೆ, ಕಮಿಟ್ ಮೆಂಟ್ ಇದೆ, ಬಡತನದ ಅರಿವಿದೆ, ನಡೆದು ಬಂದ ಹಾದಿಯ ಕಷ್ಟ ಸುಖದ ಅರಿವಿದೆ, ತನ್ನ ಕೆಲಸದ ಬಗ್ಗೆ ಗೌರವವಿದೆ, ಎಲ್ಲಾರೊಳಗೊಂದಾಗುವ ಗುಣವಿದೆ, ಎಲ್ಲಾಕಿಂತ ಹೆಚ್ಚಾಗಿ ಗೆದ್ದೆ ಗೆಲ್ಲುವೆ ಎಂಬ ಕಿಚ್ಚಿದೆ,
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಲೈಟ್ ಬಾಯ್ ನಿಂದ``ಕಮರೊಟ್ಟು ಚೆಕ್ ಪೋಸ್ಟ್``ಇಗ ``ಧೈರ್ಯಂ ಸರ್ವತ್ರ ಸಾಧನಂ``ಎಂಬ ದೊಡ್ಡ ಮಟ್ಟದ ಚಿತ್ರ ನಿರ್ಮಾಪಕ ಆನಂದ್ - Chitratara.com
Copyright 2009 chitratara.com Reproduction is forbidden unless authorized. All rights reserved.